ಜೀವನ ಎಂಬ ಸಾಗರ

ಕೆಲ ಸಾಲುಗಳ ಲೇಖನ ಮನಸಿಗೆ ಬಂದ ಯೋಚನೆ ಈ ರೀತಿ


ಜೀವನ ಎಂಬುದು ಒಂದು ಅನುಭವ
ಈ ಭುವಿಯಲಿ ಇರುವ ಕೆಲ ಕ್ಷಣದಲಿ
ಸವಿ ಕಲ್ಪನೆಯ ಗೂಡನು ಹೆಣೆದು
ತೇಲಾಡುತಿರುವೆವು ಕನಸಿನ ಲೋಕದಿ

ಕಲ್ಪನಾ ಲೋಕದ ಕಡಲಿನ ನೀರಲಿ
ಅಲೆಗಳ ಏರು-ಪೇರುಗಳನು ಮರೆತು
ಸಾಗಿಹೆನು ಜೀವನವೆಂಬ ಸಾಗರವ
ಜಯಿಸಲು ನಾನು ಈ ಜನುಮದಲಿ

ಅಂದವ ನೋಡುತಾ ಈ ನಯನಗಳು
ಅರಮನೆಯ ಕಟ್ಟುತಿಹುದು ಪ್ರತಿಗಳಿಗೆಯಲಿ
ನಾ ಜೀವನವ ಕಳೆಯುವೆ ಅರಮನೆಯಲಿ
ಸಂತಸವ ಸೂಸುತ ನನ್ನೀ ಅರಮನೆಯಲಿ

2 comments:

  ಅಂತರ್ವಾಣಿ

April 14, 2009 at 10:39 PM

ಸುಧಿ,

ಮತ್ತೊಂದು ಓಳ್ಳೆ ಕವನ.
ನೀನು ನಿನ್ನ ಈಗಿನ ಅರಮನೆಯಲ್ಲೇ ಇರಬೇಡ.. ಸ್ವಂತ ಅರಮನೆ ಕಟ್ಟಿಸು..

  ಮನಸು

April 15, 2009 at 2:41 PM

tumba olleya kavana...
jeevanada artha kalpiside..

vandanegalu..

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.