ನಿನ್ನ ಮನದಲಿ ನಾ ಅಡಗಿ ಕೂತಿರುವೆ, ನನ್ನ ಪುಟದಲಿ ತರಬಾರದೇ

ಗೆಳೆಯನು ಹೇಳಿದ ಕೆಲ ಸಾಲುಗಳು "ನಿನ್ನ ಮನಸಲ್ಲಿ ನಾ ಅಡಗಿ ಕೂತಿರುವೆ,
ನನ್ನ ಪುಟದಲ್ಲಿ ತರಬಾರದೇ" ನನ್ನ ಮನದಲಿ ಅಡಗಿದ ಈ ಕವನವನು ಈ ರೀತಿ ಹೊರತಂದಿದೆ

ಮನದಲಿ ನಾ ಅಡಗಿ ಕೂತಿರುವೆ,
ನಿನ್ನ ಪುಟದಲಿ ನನ್ನ ತರಬಾರದೇ
ಮನದ ಗೋಡೆಯ ನೋಡಿ ದಣಿದೆ,
ಕರೆದೊಯ್ಯು ನೀ ನಿನ್ನ ಆ ಪುಟದಿ

ಕಣ್ಣಿನಲಿ ಬಿಂಬಿಸುವ ವಿರಹವ
ಶಬ್ದಗಳ ಹೊಳೆಯಲಿ ಹರಿಸು
ಕತ್ತಲಿನ ಈ ಕೋಟೆಯನು ತೆರೆದು
ಬೆಳಕಿನ ಹಾದಿಯಲಿ ಪಯಣಿಸು

ಅಡಗಿಹೆ ನಾ ಎಲ್ಲಾ ಕಣ್ಣನು ಮರೆಸಿ
ದಣಿದಿಹೆ ನಾ ನಾಲ್ಕು ಕೋಣೆಯಲಿ
ಸಾರ್ಥಕವಾಗಿಸು ನನ್ನೀ ಬದುಕನು
ಲೋಕವ ವಿಹರಿಸಿ ನಿನ್ನೊಂದಿಗೆ

ಕತ್ತಲನು ತೊರೆದು ಬೆಳಕನು ತೋರುವೆ
ಬೇಸರವ ಇಂಗಿಸಿ ಸಂತಸವ ನೀಡುವೆ
ಮನದಲಿ ನಾ ಅಡಗಿ ಕೂತಿರಲು ನೀ
ನಿನ್ನ ಆ ಪುಟದಲಿ ನನ್ನ ತರಬಾರದೇ

6 comments:

  ಅಂತರ್ವಾಣಿ

June 6, 2009 at 10:06 PM

most wonderful kavana!!!
see apart from Romantic also you can write very good poem with wonderful words..

ನಾ ಹೇಳಿದ ಸಾಲು ಇಟ್ಟುಕೊಂಡು ನಾನು ಒಂದು ಕವನ ಬರೆಯುತ್ತೇನೆ.

  Sudi

June 7, 2009 at 10:34 AM

ha ha ha .. thnxz man..
cool bariri bega ondu kavana taavu idakintalu chennagi baritira bidi ;)

  ಧರಿತ್ರಿ

June 13, 2009 at 3:28 PM

ಚೆನ್ನಾಗ್ ಬರೆದಿದ್ದೀರಿ..
ಏನೋಪ್ಪಾ ಅಂತರ್ವಾಣಿ, ನೀವು ಜಿದ್ದಾಜಿದ್ದಿಗೆ ಬಿದ್ದು ಕವನ ಬರೆದಂಗಿದೆ.
-ಧರಿತ್ರಿ

  Sudi

June 13, 2009 at 3:35 PM

ಧನ್ಯವಾದಗಳು ಧರಿತ್ರಿ,
ಅಂತರ್ವಾಣಿ ಅವರೇ ಈ ಲೇಖನದ ಮೊದಲ ಸಾಲುಗಳನ್ನು ಹೇಳಿದ್ದು .. ಮಾತಾಡ್ತಾ ಮಾತಾಡ್ತಾ ಹೇಳಿದ್ರು ನಾನು ಈ ತರಾ ಹೇಳಿದೆ ಅಷ್ಟೇ :)

  ಜಲನಯನ

June 21, 2009 at 9:13 PM

ಸುದಿ,
ನಿನ್ನ ಆ ಪುಟದಲಿ ನನ್ನ ತರಬಾರದೇ..? ಒಳ್ಳೆಯ ಪರಿಕಲ್ಪಿತ ಭಾವ ಪ್ರಕಟಣೆ...ಶುಭವಾಗಲಿ...

  Sudi

June 23, 2009 at 10:40 PM

ಜಲನಯನ,
ಧನ್ಯವಾದಗಳು ಆ ಸನ್ನಿವೇಶದಲ್ಲಿ ಭಾವ ಪ್ರಕಟ ಆಗಿದ್ದು ಈ ರೀತಿ :)

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.