ಏನೋ ಜೀವನದ ಪ್ರತಿಗಳಿಗೆಯನು ಕಳೆಯುತ ಒಂಟಿತನವ? ಇಲ್ಲ ಬೇಸರವ? ಇಲ್ಲ ಬದುಕಿನ ಆಟವ? ಏನು ಅಂದು ಅರಿಯದೆ ನಾನು ಈ ಗೊಂದಲದಲಿ ಸಿಲುಕಿಹೇ
ಜೀವನ ಎಂಬ ಅಲೆಯ ಉಗ್ಗು ತಗ್ಗಲಿ
ಹಾದಿ ಎಂಬ ಭುವಿಯ ಕಲ್ಲು ಮಣ್ಣಲಿ
ಕಮಲ ಎಂಬ ಪಾದಗಳನು ಹಿಡಿದು
ಎಲ್ಲಿ ನೀ ಸಾಗಿಹೆ, ಓ ಮನವೇ
ತೋರಿಹೆ ದಿಗಂತದಷ್ಟು ಆಸರೆಯ
ನೀಡಿಹೆ ಆಗಸದಷ್ಟು ಒಲುಮೆಯ
ಈ ಮನವ ತೊರೆದು ಇಂದು
ಎಲ್ಲಿ ನೀ ಸಾಗಿಹೆ, ಓ ಸ್ನೇಹವೇ
ನಯನದಿ ಕಾಣದಿಹ ಉಲ್ಲಾಸವ
ಮನವನು ತಣಿಸುವ ಹರುಷವ
ಪ್ರೀತಿಯ ಧಾರೆಯನು ಮರೆಸಿ
ಎಲ್ಲಿ ನೀ ಸಾಗಿಹೆ, ಓ ಒಲವೇ
ಅಲ್ಲಿ ನಾ ಕಾಣದಿಹ ಏನನು ಕಂಡು
ಈ ನಯನದಿ ಓದದೆ ಏನನು ಅರಸಿ
ಜೀವನದ ಸರೋವರದಿ ಒಂಟಿಯಾಗಿಸಿ
ಎಲ್ಲಿ ನೀ ಸಾಗಿಹೆ, ಓ ಮನಸೇ
8 comments:
July 21, 2009 at 11:52 PM
WAH:-) superb kavi nee
July 22, 2009 at 12:03 AM
Tumba chennagide...sweet lines!
July 22, 2009 at 9:39 AM
Thnxz a lot both of you :)
July 22, 2009 at 11:27 PM
ಬೊಂಬಾಟ್ ಕವನ...
ಅದೇನೋ ನಿನಗ "ನಯನ" ಅನ್ನುವ ಪದ ತುಂಬಾ ಇಷ್ಟ ಅನಿಸುತ್ತೆ. ಅನೇಕ ಕವನಗಳಲ್ಲಿ ಬಳಸಿದ್ದೀಯ.. :)
ಈ ಕವನ ಓದುವ ಮುಂಚೆ ಅನಿಸಿತು.. "ನಯನ" ಇದೆಯೋ ಇಲ್ಲವೋ ಅಂತ..
July 23, 2009 at 9:23 AM
ದನ್ಯವಾದ ಅಂತರ್ವಾಣಿ,
ಇಷ್ಟ ಅಂತ ಏನು ಇಲ್ಲ ಆ ಸನ್ನಿವೇಶಕ್ಕೆ "ನಯನ" ಅನ್ನೋ ಪದ ಪ್ರಾಸಬದ್ದವಾಗಿರತ್ತೆ ಅದಕ್ಕೆ ಬಳಸ್ತೀನಿ..
July 29, 2009 at 10:23 AM
ಚೆನ್ನಾಗಿದೆ :)
July 29, 2009 at 10:25 AM
ಧನ್ಯವಾದಗಳು
September 13, 2009 at 12:10 AM
Good one...
Post a Comment