ಮನದಂಚಿನಲಿ ಯಾರದೋ ಮುದ್ದು ಮೊಗವು ಕಾಡುತಾ ಇತ್ತು, ಏನೋ ಒಂದು ತಳಮಳವೂ ಇತ್ತು ಮುಂದೆ ನೀವೇ ಓದಿ ....
ನಿನ್ನ ನೋಡಿ ಮನದಿ ಏನೋ ಕಂಪನ
ಕಣ್ಣಲಿ ನಿಲುಕದ ನಿನ್ನ ಆ ಚೆಲುವು
ನೋಟವ ಇರಿಸಲಾರದೆ ನಿನ್ನ ನೋಟದಿ
ಒದ್ದಾಡಿಹುದು ಈ ಒಂಟಿ ಜೀವ.
ನೀ ಬರುವೆ ಎಂದು ಹಾದಿಯ ನೋಡುತ
ಬಂದರೆ ನಿನ್ನಯ ನೋಡಲು ಆಗದೆ
ನಿನ್ನ ಮುದ್ದು ಮೊಗವ ಕಣ್ಣಲೆ ಇರಿಸಿ
ಹಾದಿಯಲೇ ಕೂತಿದೆ ನಿನ್ನ ಒಂದು ನೋಟಕೆ
ತುಸು ಮಾತನು ಆಡಲೇ ನಿನ್ನ ಬಳಿ
ನನ್ನನು ಪರಿಚಯಿಸಲೇ ಒಮ್ಮೆ ಮನಕೆ
ನಿನ್ನ ಕಂಡು ಮನವು ಕಂಪಿಸಿತು ಅಂದು
ಕಂಪಿಸಿದ ಮನವ ಸಂತೈಸೆಯ ನೀ ಇಂದು
ನೀ ಯಾರೆಂದು ತಿಳಿಯಲೇ ನಾನು
ಯಾರೆಂದು ಹೇಳಲೇ ನಾ ಇಂದು
ಮನವನು ಅರಿಯದೆ ನಾ ಬಳಲಿಹೆ
ಸಂತೈಸುವೆಯ ಒಮ್ಮೆ ನೀ ಬಂದು
1 comments:
July 17, 2010 at 9:49 AM
ನನಗೆ ಹೇಳಿ ಬರೆಸಿದ ಹಾಗಿದೆ ಕವಿತೆ . ನಂಗೆ ತುಂಬಾ ಇಷ್ಟ ಆಯ್ತು
Post a Comment