ಈ ದಿನ ಮುಂಜಾನೆ ಎದ್ದು ಹೊರಟೆವು ನಾನು ನನ್ನ ಗೆಳೆಯನು ಜೊತೆಗೂಡಿ ಹೊರಟೆವು ಗೆಳೆಯನ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ....ನಮ್ಮ ಇನ್ನೊಬ್ಬ ಗೆಳೆಯನು ಬರುವೆನೆಂದು ಹೇಳಿ ನಾವು ಅಲ್ಲಿ ಅವನ ಹಾದಿ ಕಾಯುತ್ತಿದ್ದೆವು. ನಮ್ಮ ಈ ದಿನವನ್ನು ಸ್ವಲ್ಪ Shopping ಮಾಡಿ ಕಳೆಯುವ ಉಪಾಯ ನಮ್ಮದಾಗಿತ್ತು.
ಸಮಯ ಕಳೆಯಿತು ಮುಂಜಾನೆ ಕಳೆದು ರವಿ ನೆತ್ತಿ ಮೇಲೆ ಬಂದಾಗ ನಮ್ಮ ಗೆಳೆಯ ಬಂದ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ, ಗೆಳೆಯನ ಹೊಸ Bike ಅಲ್ಲಿ ಒಂದು test ride ಪಡೆದು ನಾವು ನಡೆದೆವು ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಅಲ್ಲಿ ಸ್ವಲ್ಪ ಸಮಯ ಕಳೆದು ಹೊರಟೆವು ಊಟ ಮುಗಿಸಲು .. :) ..
ಏನೇ ಆಗ್ಲೀ ಊಟ ಅಂತೂ ಆಗಲೇ ಬೇಕು ಸಮಯವಾಗಿತ್ತು 3:00 ಗಂಟೆ ಹೊಟ್ಟೆಯಲ್ಲಿದ್ದ ಜೀವಜಂತುಗಳೆಲ್ಲ ವಿಲ ವಿಲ ಒದ್ದಾಡೂತಿದ್ದವು... ನಮ್ಮ ಕಷ್ಟ ಹೇಳಿ ತೀರದು ಹಸಿವಿನಿಂದ.ಊಟ ಮುಗಿಸಿ ಅಲ್ಲೇ ಇದ್ದ ಉದ್ಯಾನವನದಲ್ಲಿ ಸ್ವಲ್ಪ ವಿಶ್ರಾಂತಿ ಬಳಿಕ ನಮ್ಮ ಕಾರ್ಯಕ್ರಮ shopping !...ಮುಖ್ಯವಾಗಿ ನನ್ನ ಪಾದರಕ್ಷೆ ಕೊಂಡುಕೊಳ್ಳುವ ಯೋಚನೆ , ಹೊರಟೆವು 3 ಜನ ತ್ರಿಮೂರ್ತಿ ಅಂತ ಕರೀಬೇಡಿ ಸರಿನಾ.. :)
ಹೋದೆವು ನಾವು ಜೊತೆಗೂಡಿ ಮೊತ್ತ ಮೊದಲು ನಮ್ಮ Adidas ಅಂಗಡಿಯ ಮೆಟ್ಟಿಲನ್ನು ತುಳಿದು ಒಳ್ಳೆಯ ಪಾದರಕ್ಷೆಯ ಹುಡುಕಾಟದಲ್ಲಿ. ನನಗಂತು , ಇನ್ನೂ ಸರಿಯಾಗಿ ಹೇಳೋದಾದರೆ ನನ್ನ ಪಾದಗಳು ಇಷ್ಠಪಡುವಂತ ಪಾದರಕ್ಷೆಗಳಂತೂ ಕಾಣಲಿಲ್ಲ ಆದರೆ ನನ್ನ ಗೆಳೆಯನಿಗೆ ಓಡುವ ಪಾದರಕ್ಷೆ [ಅಂದ್ರೆ ಪಾದರಕ್ಷೆ ಓಡೋದಲ್ಲ ಓಡುವಾಗ ಧರಿಸುವಂತ ಪಾದರಕ್ಷೆ . . . ಹ ಹ ಹ ಹಾಹಾ :) ]ಬೇಕಂತ ಹೇಳಿ ನಾವು ಒಂದು ಜೊತೆ ಪಾದರಕ್ಷೆ select ಮಾಡಿದೀವಿ.
ಇಷ್ಟೆಲ್ಲಾ ಆಯಿತು ನನ್ನ ಈ Blog ಆದರೂ ಯಾಕೆ ನನ್ನ Blog ನ title ಯಾಕೆ ಇನ್ನೂ ಅರ್ಥ ಆಗಿಲ್ಲ ಅಂತ ತಳಮಳ ನಾ ನಿಮ್ಮ ಮನದಲ್ಲಿ....ಈ ಶೀರ್ಷಿಕೆ ಕೊಡಲು ಮುಖ್ಯ ಕಾರಣ ಏನಂದ್ರೆ ನನ್ನ ಗೆಳೆಯನ ಮನದಲ್ಲಿ ಆಗುತ್ತಿದ್ದ ತಳಮಳ ... ಅದೇನಂದರೆ ಮನೆಯಲ್ಲಿ ಏನು ಉಪಚಾರ ಕಾದಿದೆಯೋ ನನ್ನ ಈ Shopping ಇಂದ ಅಂತ.. :) ಯಾಕ್ರೀ ನಗು... ಮನಸಲ್ಲಿ ನನ್ನ ಗೆಳೆಯನ ಬಗ್ಗೆ ಏನು ಯೋಚಿಸಿದ್ ಹಾಗಿದೆ .. ಇದು ಬರೇ ಶುರುವಿನ ತಳಮಳ.. ಇನ್ನೀರೋದು ಮಸ್ತ್ ಮಜಾ....
ನಮ್ಮ Adidas ಪ್ರಯಾಣ ಮುಗಿಸಿ ಹೊರಟೆವು Woodland ಕಡೆಗೆ... ಅಂಗಡಿ ಒಳಗೆ ಹೋಗಿ ನೋಡಿದರೆ ನನ್ನ ಪಾದಗಳನ್ನ ಮೋಹಿಸುವಂತ ಪಾದರಕ್ಷೆ ಗಳು ಅಲ್ಲಿಗೆ ನನ್ನ ಇವತ್ತಿನ Shopping ಮುಗೀತು ನಂಗೆ ಬೇಕಾದ ಪಾದರಕ್ಷೆ ಕೊಂಡಾಯಿತು...
ಅಷ್ಟರಲ್ಲಿ ನನ್ನ ಗೆಳೆಯನ ಗಮನ ಹರಿಯಿತು ಎಕ್ಸ್‌ಕ್ಯಾಲಿಬರ್ ಅಂಗಡಿಯ ಕಡೆ .... ಆವಾಗ ನಮ್ಮ ಪ್ರಯಾಣ ಹೊರಟಿತು ಎಕ್ಸ್‌ಕ್ಯಾಲಿಬರ್ ಕಡೆ.. ಅಲ್ಲಿತ್ತು ಎರಡರ ಜೊತೆ ಮತ್ತೆ ಎರಡು ರಿಯಾಯಿತಿ Sales ಇಲ್ಲಿ ಈ ಅಂಗಡಿಯಲ್ಲಿ ಗೆಳೆಯ ಅಂತೂ ಪೂರ್ತಿ ತಳಮಳ ... .. ಅವನ ಮನದಲ್ಲಿ ಯೋಚನೆಗಳ ಸರಮಾಲೆಯೇ ಹರಿದು ಬರುತಿತ್ಟು . ಒಂದು ಕಡೆ ಕೊಳ್ಳುವ ಹಂಬಲ ಇನ್ನೊಂದೆಡೆ ಮನೆಯವರ ಮಾತನ್ನು ಕೇಳುವ Tension ನೋಡಬೇಕಿತ್ತು ಅವನ ಆ ಪರಿ...... ಒಂದು ಸಲ ಅವನ ಮನದ ಮಾತಾಗಿತ್ತು ಎಲ್ಲರೂ ಸೇರಿ ಎರಡರ ಜೊತೆ ಮತ್ತೆ ಎರಡು ರಿಯಾಯಿತಿಯ ಸದುಪಯೋಗ ಮಾಡಿ ಎಲ್ಲರೂ ಬಟ್ಟೆ ಕೊಳ್ಳೋಣವೆಂದು..ಹಾಗೂ ಹೀಗೂ ಮಾಡಿ ಕೊನೆಗೂ ನಾವು ನಿರ್ಧರಿಸಿ 2 ಜೊತೆ Dress ಕೋಡೆವು ನನ್ನ ಗೆಳೆಯನಿಗಾಗಿ .. ಅಂತೂ ಇಂತೂ ಗೆಳೆಯನ ತಳಮಳ ಮುಗಿದು ಕೊನೆಗೂ ಅವನು ಕೊಂಡನು ಎಕ್ಸ್‌ಕ್ಯಾಲಿಬರ್ ಬಟ್ಟೆ :)
ಹೇಗಿತ್ತು ಗೆಳೆಯನ ತಳಮಳ ... ನಂಗಂತೂ ಈ ರೀತಿ ತಳಮಳ ಎಲ್ಲರಿಗೂ ಇದ್ದೇ ಇರುತ್ತೆ ... ಏನಂತೀರಾ...ಉದಾಹರಣೆಗೆ ನಾನು ಈ Blog ಬರೆಯುವ ವೇಳೆ ಪಟ್ಟ ತಳಮಳ ... :)
ಗೆಳೆಯನ ತಳಮಳ
Posted by Sudi Saturday, February 23, 2008 at 8:14 PM
Labels: Kannada
Subscribe to:
Post Comments (Atom)
1 comments:
February 26, 2008 at 10:47 AM
Antu intu shopping mugitu anni??:)
Post a Comment