ಮಳೆಯ ಹನಿಗಳ ಸದ್ದನು ಆಲಿಸಿ.. ಅದ ನಾ ಇಲ್ಲಿ ಈ ಕವನವಾಗಿ ಬರೆಯುವ ಯತ್ನ ಮಾಡಿದೆ ..
ಸ್ತಬ್ಧ ಸಂಧ್ಯಾಕಾಲದ ಮೌನವ
ಮರೆಸಿ ದಿನದ ದಣಿವ ನೀಗಿಸೋ
ನೀ ಕರೆತಂದೆ ಮನದ ಉಲ್ಲಾಸ
ಹನಿಯೂಡುತ ಬರುವ ಹಾದಿಯಲಿ
ನಡುಹಗಲಲಿ ನಿನ್ನಯ ಯೋಚನೆ
ಈ ಗಳಿಗೆ ಬರುವೆ ನೀ ಎನ್ನುತಾ
ನಾ ಗೂಡ ಸೇರುವೆನು ಸಂಜೆ
ನೀ ಹನಿಯೂಡಿ ನೆನೆಸುವ ಮುನ್ನ
ಬರದಿರು ನೀ ಬಂದು ನೆನೆಸದಿರು
ನನ್ನಯ ಗೂಡನು ಸೇರುವೆ ನಾ
ಹಾದಿಯ ಕಾಯುತ ಬರಮಾಡುವೆ
ತಂಪು ಹನಿಯ ನಿನ್ನ ಆಗಮನವ
ಶೀತಲ ಹನಿಯ ಸ್ವರ್ಣಸ್ಪರ್ಶವು
ಸೌಮ್ಯವಾಗಿಸಿತು ಪುಳಕಿತ ಮನವ
ನೆನೆ ಗೂಡನು ಸೇರುವ ಮುನ್ನಾ ನೀ
ಹನಿಯೂಡುತ ಹೇಳುತಿಹನು ವರುಣ
ಬಂದೆ ಒಲವ ನಾದದಿ ಹನಿಯಾಗಿ
ತಂದೆ ನೀ ಜೊತೆ ಶೀತಲ ಸುಧೆಯ
ಮನದಲಿನ ಚಿಂತೆಯ ನಿನ್ನಲಿ ತೇಲಿಸಿ
ಹನಿಯೂಡುವ ನಿನ್ನ ನೋಡಿ ಮೈಮರೆತೆ
4 comments:
August 20, 2008 at 10:07 PM
ನಿಜವಾಗಳು ನೀನೇ ಬರ್ದ್ಯಾ?
ಆಫೀಸಿಂದ ಮನೆಗೆ ಹೋಗೋವಾಗ ಮಳೆ ಕಾಟ ಕೊಟ್ಟಂತಿದೆ...
August 20, 2008 at 11:23 PM
yaakappa bere elladru odiddiya idna ???
August 21, 2008 at 11:10 PM
prathiyOMdu haniyannu anubhavisi barediruva kavithe thumbA sogasAgi mUdibandihudu!
August 21, 2008 at 11:12 PM
Pushpa, tumba santhosha aaithu tamma comment odi :)
Post a Comment