ಈ ದಿನ ... ಆ ಧ್ವನಿ ...

ಎಲ್ಲರೂ ಹುಡುಕುವ ಆ ಮಧುರ ಸ್ವರದ ನಾದವನು ಈ ತರ ವರ್ಣಿಸಲೇ ನಾನು ಇಂದು ...

ನಿನ್ನ ಕಾಣದೆ ತಡಕುವ ಈ ಮನ
ನೋಡಲೆಂತು ನಿನ್ನ ಆಲಿಸಿ ಸ್ವರ
ಅರಿಯದೇ ಎಲ್ಲಿಹೆ ಅರಸಿತು ನಯನ
ಮನದಿ ಕಂಡಿತು ನಿನ್ನಯ ಈ ದಿನ

ನೆನಪಿನ ದೋಣಿಯಲಿ ನಾ ಪಯಣಿ
ಸಾಗುತಿಹೆ ಸ್ಮೃತಿ ಮಜಲನು ನಗುತ
ಹಂಬಲವ ಬೆಳೆಸುತಾ ಕಾಯುತಿಹೆ
ಕಿವಿಯೂಡುತ ಸೌಮ್ಯ ಕಂಠವ ಈ ದಿನ

ಮಧುರ ಶಭ್ದಜಾಲವ ವರ್ಣಿಸಲಾಗದೆ
ಪ್ರೇರಿಸುತ ಮತ್ತೆ ಕೇಳುವ ಬಯಕೆಯ
ತೇಲುತ ಸ್ವಪ್ನದಿ ಏಕಾಂತವ ಮರೆತು
ಮನವ ಸಂತೈಸುತಿಹೆನು ಈ ದಿನ

2 comments:

  ಅಂತರ್ವಾಣಿ

September 28, 2008 at 5:04 PM

ಚೆನ್ನಾಗಿ express ಮಾಡಿದ್ದೀಯ.

ಬರೆಯೋದು ನಿಲ್ಲಿಸಿದರೆ ಬೇಜಾರಾಗುತ್ತೆ ನನಗೆ.

  Sudi

September 29, 2008 at 10:09 AM

thnk u man :)

ನಿಲ್ಲಿಸೋ ಯೋಚನೆ ಏನು ಇಲ್ಲ.. ಆದ್ರೆ ಬರಿಯೋ ಪಥ ನಿಧಾನ

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.