ಕನಸೋ... ನನಸೋ....

ಆ ಹೊತ್ತಲಿ... ಅವಳನು ಕಂಡು ಕನಸಿನ ಲೋಕದಿ ತೇಲುತಿದ್ದ ನನ್ನನು.... ಭೂಲೋಕಕೆ ಕರೆತಂದ ರೀತಿ ನೋಡಿ

ಬಹು ದಿನಗಳ ಪಯಣವ ಮರೆಸಿ
ಹಾದಿಯ ಕಾದು ಬತ್ತಿದ ನಯನಕೆ
ಮರಳು ಗಾಡಿನ ದಾಹವ ಮರೆಸಿ
ಉಲ್ಲಾಸ ನೀಡಿತು ಅವಳ ನೋಟ

ಆ ನೋಟಕೆ ಕಣ್ಣನು ಮಿಟುಕಿಸಲಾಗದೆ
ನನ್ನ ಮರೆತು ಕರಗಿದ್ದೆ ನಾ ಅವಳಿಗೆ
ಹಂಬಲದಿ ತೇಲಿದ್ದ ನಮ್ಮ ಬಳಗವು
ಹರ್ಷಪುಲಕದಿ ಮರೆತಿತ್ತು ಲೋಕವ

ಅರಸಿಹುದು ಆಗಲೇ ಅವಳ ನಯನ
ನೋಟವು ತಲುಪಿಹುದು ಸಂಗಾತಿಯ
ಈ ನಯನವ ನೀ ದಾಹಿಸದಿರು
ಫಲವಿಲ್ಲದೆ ಮರುಗಿಸದಿರು ಈ ಮನವ

ಕನಸಿನ ಕನ್ನಡಿ ಒಡೆದು ಚೂರಾಗಿಸಿ
ಗೆಳೆಯನ ಮಾತು ಚುಚ್ಚಿತು ಮನದಿ
ಅರಿಯಲು ನಾ ತೇಲುತಿಹೆ ಸ್ವಪ್ನದಿ
ಭುವಿಗಿಳಿದೆ ಕಲ್ಪನಾಗೂಡನು ಕಳಚಿ

ಅರಿತು ಮನವು ಮರುಗಿತ್ತು ಆ ಹೊತ್ತು
ಆಡುವ ಆಟದ ಕೊನೆಯು ವಿಧಿಲಿಖಿತ
ಮರುಗದಿರು ನೀ ವಿಧಿಯಾಟಡಿ ಸಿಲುಕಿ
ಸಂತೈಸಿತು ಶ್ರದ್ದೆಯು ಆತ್ಮವಾಣಿಯಲಿ

3 comments:

  Pramod

December 11, 2008 at 10:40 AM

ಕನಸು ಮೊಳಕೆಯೊಡೆದು ಕವನವಾಗಿದೆ, ಚೆನ್ನಾಗಿದೆ.
ಕನಸು ಬೆಳಗ್ಗಿನ ಜಾವದ್ದು ಅ೦ದ್ರೆ ನನಸು ಆಗೋ ಪ್ರೊಬ್ಯಾಬಿಲಿಟಿ ಜಾಸ್ತಿ 'ಅ೦ತೆ' :)

  Anonymous

December 11, 2008 at 4:19 PM

kavithE thumbaaane sogasAgi mUdibandide bhAvanegaLa sinchandondige...:)
Aadare nimma kavitheli swlpa gondala Eddu kaansthide.

  ಅಂತರ್ವಾಣಿ

December 11, 2008 at 10:37 PM

ಸುಧಿ,
ತೂಕವಿರುವ ಪದಗಳನ್ನು ಹಾಕಿ ಚೆನ್ನಾಗಿ ಬರೆದಿದ್ದೀಯ..

ಬರೆಯೋದು ನಿಲ್ಲಿಸ ಬೇಡ

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.