ಆ ದಿನಗಳು

ಮುಂಜಾನೆ ಎದ್ದು ನಡೆಯುತ
ಹಾದಿಯುದ್ದಕು ಲಿಫ್ಟ್ ಕೇಳುತ
ಕಾಲೇಜು ಹೋಗುತ್ತಿದ್ದ ಆ ದಿನಗಳು

ತರಗತಿ ಸಮಯದಲಿ ಪಾಠ ಕೇಳುತ
ಕ್ಯಾಂಟೀನ್ ಕಾಫಿ ನೆನೆಯುತ
ಗಡಿಯಾರದ ಮುಳ್ಳುಗಳ ಪಯನವ
ನೋಡುತಿದ್ದ ಆ ದಿನಗಳು

ಬಿಡುವಿನ ಸಮಯದಲಿ
ಕ್ಯಾಂಟೀನಿನ ಆಸನದಲಿ
ಒನ್ ಬೈ ಟು ಕಾಫಿಯ
ಸವಿದ ಆ ದಿನಗಳು

ತರಗತಿಯ ಮುಗಿಸಿ ಮನೆಯ ಹಾದಿ
ಹಿಡಿಯುವ ಮುನ್ನ ದ್ವಿಚಕ್ರ ವಾಹನಗಳ ಮೇಲೆ
ಹರಟೆಯ ಆ ದಿನಗಳು

ಇಂದಿನ ಈ ತಂತ್ರ ಯುಗವು
ಅಂದಿನ ಆ ಸಮಯವನು
ಮನದಾಳದ ನೆನಪಾಗಿಸಿ
ಮತ್ತೆ ಮತ್ತೆ ಸವಿಯುವಂತೆ
ಮಾಡಿವೆ ಆ ದಿನಗಳು

2 comments:

  ಅಂತರ್ವಾಣಿ

March 13, 2008 at 10:29 PM

sakkathaagi nam college dina gaLu nenesi kondideeya. naanu nin jote 1/2 coffe / Tea kuDidaddu nenapaaytu.
idly, vada tindiddu nenapaaytu. haarte hoDedaddu nenapaaytu. kannu tampu madkoDiddu nenapaaytu

  Sudi

March 18, 2008 at 2:06 PM

ಹ ಹ ಹ ಹ ಅದೇ ಕಾಲೇಜ್ ಅಲ್ಲಿ ಕಳೆದ ಆ ದಿನಗಳು ..... ನನ್ನ ಈ ಬ್ಲಾಗ್ ನಿನ್ನ ಮನದಾಳದಲ್ಲಿದ್ದ ನೆನಪುಗಳಿಗೆ ಮತ್ತೊಮ್ಮೆ ಜೀವ ತುಂಬಿತೆಂದು ತಿಳಿದು ಆನಂದವಾಯಿತು

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.