ನನ್ನ ಒಂಟಿ ಮನವ ಕಾಡುತಿದ್ದ ಬೇಸರ ನೀಗಿಸಿದ ಕೆಲ ನಿಮಿಷದ ಸಂಭಾಷಣೆಯು (ಅಂತರ್ಜಾಲದಲಿ ಹರಟೆ) ತಂದ ಉಲ್ಲಾಸವನ್ನು ಕವನದ ರೂಪದಲ್ಲಿ ಬರೆಯುವ ಹರ ಸಾಹಸ
ಧ್ಯಾನವೊಂದು ಕಾಡುತಿತ್ತು ನನ್ನೀ ಮನವ
ಗೊಂದಲದಲಿ ತೇಲುತಿತ್ತು ಮನವು
ಅರಿಯದಾದೆ ನಾ ನನ್ನೀ ಮನವ
ಯಾರದೋ ಹಾದಿಯ ಕಾಯುತಿತ್ತು
ಕಾಣದಾದೆ ಮನದ ಹರುಷವ
ಅರಿಯದಾದೆ ಮನದ ತಳಮಳವ
ಕಂಡು ನಿನ್ನ ಕುಣಿಯಿತೀ ಮನವು
ಸಂತಸದ ಸಮಯವೇ ನಿನ್ನೀ ಆಗಮನ
ಬಿಸಿಲ ಬೇಗೆಯ ಮರೆಸಿದ ಗಾಳಿಯು ನೀ
ಕಗ್ಗತ್ತಲೆಯ ಮರೆಸಿ ಬೆಳಕಂತೆ ಬಂದೆ ನೀ
ಒಂಟಿತನದ ಕತ್ತಲನು ಕಳೆದೆ ನೀ ಬಂದು
ದುಃಖಿತ ಮನದ ಉಲ್ಲಾಸ ನಿನ್ನೀ ಆಗಮನ
4 comments:
March 30, 2008 at 12:29 AM
ಕವನ ಸೂಪರ್ ಕಣೊ..ಅಂದಹಾಗೆ....ಯಾರೋ ಸುಧಿ ಆ ಮಹಾತಾಯಿ??
March 30, 2008 at 12:34 AM
ಥ್ಯಾಂಕ್ಸ್ ಕಣೋ..
ಅದು ಸ್ವಲ್ಪ secret ಈ ಕವನಕ್ಕೆ ಅವಳೇ ಸ್ಪೂರ್ತಿ
July 27, 2008 at 12:26 AM
ಕೊನೆಯ ನಾಲ್ಕು ಸಾಲುಗಳು ನಿಮ್ಮ ಆ ಸಂಭಾಷಣೆಯಲ್ಲಿ ನಿಮ್ಮಲ್ಲಿ ಉಂಟಾದ ಬದಲಾವಣೆಯ ರೋಚಕತೆಯ ಮನದಾಳದ ಬಿಂಬ ಇಲ್ಲಿ ಕಾಣ್ತಿದೆ..
July 27, 2008 at 12:37 AM
thnk u :)
Post a Comment