ಸ್ವಪ್ನಲೋಕದಿ

ಈ ಕವನವು ನಾ ನನ್ನ ಗೆಳೆಯನೊಬ್ಬನ ಕಾಲ್ಪನಿಕ ಚಿಂತನೆ ಮೇಲೆ ನನ್ನ ಮನದ ಕೆಲ ಮಾತುಗಳನ್ನ ತುಂಬಿ ನಿಮ್ಮ ಮುಂದಿಡಲು ಮಾಡಿದ ಯತ್ನ ..

ನಿದ್ದೆ ಬರುತಿಹುದು ಮಲಗದಾದೆ ನಾ
ತಂಗಾಳಿ ಹಾಡುತಿಹುದು ಕೇಳದಾದೆ ನಾ
ಕನಸುಗಳ ಬೀಡು ಕಾಯುತಿಹಲು ಹಾದಿಯ
ನಾ ಹೆಜ್ಜೆಯ ಇಡದಾದೆ ಸ್ವಪ್ನಲೋಕದಿ

ಕಾಡುವುದು ಅವಳ ನಗುವು ಬೆಂಬಿಡದೆ
ನಿದ್ಡೆಯ ಗೂಡು ಕಟ್ಟಲಾಗದೆ ನಾನು
ಶಯ್ಯೆಯ ಮೇಲೆ ನಯನಗಳ ತೆರೆದು
ಚಡಪಡಿಸಿ ಹೆಜ್ಜಯಿಡಲಾದೆ ಸ್ವಪ್ನಲೋಕದಿ

ಬತ್ತಿ ಹೋದ ಕಂಗಳ ಕೆಂಪು ನೋಟವ
ಗೆಳೆಯರ ದಿಟ್ಟನೆಯ ನೋಟದಿಂದ ನಾ
ಬಚ್ಚಿಟ್ಟು ದುಃಖ ತುಂಬಿದ ಮನದ ಹೊಯ್ದಾಟವ
ನಯನದಿ ಹನಿಗೂಡಿಸಿ ಹೆಜ್ಜಯಿಡಲಾದೆ ಸ್ವಪ್ನಲೋಕದಿ

ದುಃಖಿತ ಮನದ ತಳಮಳ ನನ್ನ ಕನಸೇ
ರೆಪ್ಪೆಯ ತಡೆದು ಕನಸ ಹಿಡಿದಿಹೆಯಾ ನೀ
ಅವಳ ನಗುವಿಹುದು ಈ ಕಂಗಳಲಿ ಅಳಿಸದಾದೆ
ನಾ ಕಣ್ಮುಚ್ಚಿ ಹೆಜ್ಜಯಿಡಲಾದೆ ಸ್ವಪ್ನಲೋಕದಿ

1 comments:

  ಅಂತರ್ವಾಣಿ

May 4, 2008 at 1:08 AM

abba! entha kalpaneyO?

nija jeevanadalli hogu swapna lOkakke....

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.