ನಾನು ಅರ್ಹನಲ್ಲವೇ...ಅವರಂತೆ ನಾನು ಬಲ್ಲೆನಲ್ಲವೇ... ಅವರಿಗಿಂತ ನಾನೇನು ಕಮ್ಮಿ .....
ಅಂದಿನ ಆ ತೂಕಡಿಕೆಯ ನೇತ್ರಗಳ
ಎದೆಯಲಿ ಹಿಡಿದಿಟ್ಟ ಆ ಆಕಳಿಕೆಯ
ತಲೆಯ ಸಿಡಿಸಿ ಎಲ್ಲವ ಮರೆಸುವ
ನೋವಿನೆಡೆಯಲಿ ಮಾಡಿದ ಆ ಕೆಲಸ
ನನ್ನಯ ಜೀವನದ ಮುದ್ದಿನ ಸಮಯವ
ಮನೆಯವರ ಸಿಹಿ ಮಾತುಗಳ ಸವಿಯುವ
ಸಂತಸದ ಗೆಳೆಯರ ಜೊತೆಗಿನ ಗಳಿಗೆಯ
ಮರೆಮಾಡಿ ಒಪ್ಪಿಸಿದೆ ನನ್ನೇ ಆ ಕೆಲಸಕೆ
ಯೋಚನೆಯ ಮಾಡಿದೆ ಫಲವಿಹುದು
ಕೊಡುವುದು ನನ್ನ ಶ್ರಮದ ಪ್ರತಿಫಲವ
ಕಾದಿದ್ದ ಈ ಗಳಿಗೆಯೂ ಬಂದಿಹುದು
ನನ್ನ ಮನವ ಕದಡಿಸಿತು ಆ ಕೆಲಸ
ಪ್ರತಿಫಲವು ಹಣ್ಣಾಗದೆ ಹಿಂದಿರುಗಿತು
ಶ್ರಮವೆಲ್ಲ ಕಳೆದು ಬೆವರಿನ ಹನಿಯಾಯಿತು
ಸಮಯವ ಕಳೆದೆ ನಾ ಹರುಷವ ಅರಸಿ
ಬಯಕೆಯ ಮಾಯವಾಗಿಸಿತು ಆ ಕೆಲಸ
2 comments:
May 9, 2008 at 8:06 PM
namaskara Sudhi, nimma blogige nanna modala bhETi idu. Chendada kavanagaLannella Odi khushi paTTe. thank you. keep writing..
May 9, 2008 at 10:55 PM
ಕವನ ತುಂಬಾ ಚೆನ್ನಾಗಿದೆ ಕಣೋ..
Post a Comment