ನಮ್ಮ ಕಸರತ್ತು

ನಾನು ನನ್ನ ಗೆಳೆಯನ ಪ್ರತಿ ಭೇಟಿಯ ವೇಳೆ ನಡೆಯುವ ದಿಟ್ಟ ನಿರ್ಧಾರ ನಾಳೆಯಿಂದ ನಮ್ಮ ಭೇಟಿ ವ್ಯಾಯಾಮ ಶಾಲೆಗೆ, ಮುಂದೆ ಓದಿ ಹೇಗೆ ನಡೆಯುತ್ತೆ ನಮ್ಮ ಕಸರತ್ತು . . . .

ಮನದ ದೃಢ ನಿಲುವು ಆಗಿತ್ತು
ಮುಂಜಾನೆ ಎದ್ದು ಹೋಗಬೇಕಾಗಿತ್ತು
ಪ್ರತಿ ಇರುಳಿನ ಚಿಂತನೆಯಾಗಿತ್ತು
ನಾಳೆ ಶುರುವಾಗಬೇಕಿತ್ತು ನಮ್ಮ ಕಸರತ್ತು

ನಿಲುವು ಹೊಂದಿ ಕಳೆದ ಪ್ರತಿ ದಿನವು
ತಿಂಗಳಾದವು ದಿನಗಳು ಉರುಳಿ
ಮನವು ತಿರುಗಿ ಪಡೆದ ಮಾತಾಗಿತ್ತು
ಪುನಃ ಶುರು ನಾಳೆ ನಮ್ಮ ಕಸರತ್ತು

ಮರುಕಳಿಸಿದ ಗೆಳೆಯನ ಚಿಂತನೆ
ದೃಢ ಸದ್ಭಾವನಾ ಭೇಟಿ ನಾಳೆ
ದಿಟ್ಟ ನಿಲುವಿನ ಜೊತೆಗಿನ ಕನಸು
ಮುಗಿದಿತ್ತು ಎಚ್ಚರಿಕೆ ಗಂಟೆಯ ಜೊತೆ

ಪ್ರಾಥಃಕಾಲ ನಯನಗಳ ತೆರೆದು
ನಿನ್ನೆಯ ಚಿಂತನೆ ನೆನೆದು ತಿರುಗಿ
ನಿದ್ರಾಲೋಕದೆಡೆ ಪಯಣ ಹೊರಟು
ಕೊನೆಗೊಂಡಿತ್ತು ನಮ್ಮಯ ಕಸರತ್ತು

1 comments:

  ಅಂತರ್ವಾಣಿ

May 1, 2008 at 6:18 PM

ಗೊತ್ತಾಯ್ತು ನಿಮ್ಮ ಕಸರತ್ತು ಹೇಗೆ ಅಂತ.
ಸಕ್ಕತ್ತಾಗಿ ಬರೆದಿದ್ದೀಯ.

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.