ಕಣ್ಣೀರಾಗಿ ಹನಿಯಿತು

ಹಸಿರಾಗಿದ್ದ ಸಂತಸದ ದಿನವ ಕಳೆಯುವ ವೇಳೆಯಲಿ ಅರಿಯದೇ ನಾ ನೋಯಿಸಿದ ಆ ಮನವ ....

ರವಿಕಿರಣದ ಜೊತೆ ಆರಂಭವಾದ
ನನ್ನೀ ನಿಯತವ ಚೂರು ಬದಲಾಗಿಸಿ
ದಿನಚರಿಯ ಮರೆತು ಹೊಸತನು
ಕಂಡು ಅನುಭವಿಸಿ ಕಳೆದೆ ದಿನವ

ಎಂದಿನಂತೆ ಇದ್ದರೂ ಬದಲಿಸಿಹೆ ನಾ
ಮುದ್ದಾಗಿಹುದಾದರೂ ದಣಿವ ನಾ ಕಂಡೆ
ಭಿನ್ನ ಕಾಯಕವ ನಾ ಪಡೆದು ಕಳೆದೆ
ಹೊಸತಾಗಿ ತಲುಪಿದೆ ದಿನದ ಗುರಿಯ

ಯಾವ ಗಳಿಗೆಯೂ ಏನೋ ಕರೆದು
ಒಯ್ದಿತು ನನ್ನ ಕೆಲ ಕ್ಷಣಗಳ ಮಿಲನಕೆ
ಯಾರ ದೃಷ್ಟಿ ತಗಲಿತೋ ನಾ ಕಾಣೆ
ವರುಷದ ಗೆಳೆತನ ಕಂಡಿತು ಬಿರುಕು

ಗುರಿ ಮುಟ್ಟಿದ ಸಂತಸವು ಕರಗಿ
ದುಃಖದ ಕಣ್ಣೀರಾಗಿ ಹನಿಯಿತು ನಯನದಿ
ನೋಯಿಸದ ಮನವ ಒಂದು ಕ್ಷಣದಿ
ಚೂರಾಗಿಸಿ ವ್ಯಥೆಯಲಿ ಕರೆದೊಯ್ಯಿತು

ಮುಂಜಾವದ ಸಿಹಿಗನಸ ನನಸಿನ
ಹಾದಿಯ ಹರುಷದ ಕೆಲ ಹೆಜ್ಜೆಯೂ
ಮುಸ್ಸಂಜೆಯ ರವಿಯ ಕಿರಣದ
ಜೊತೆಯಲಿ ಕತ್ತಲಿನೆಡೆ ಸಾಗಿತು

ದುಃಖಿಸಿದ ಮನದ ಬಳಿ ಕ್ಷಮೆಯ
ಕೇಳಲು ಪದಗಳು ಕಾಣದೆ ಪರಿತಪಿಸಿತು
ಮಾತನಾಡಲು ಮುಂದಾದರೆ ಕಂಠವು
ಸಮ್ಮತಿಯ ನೀಡದೆಂದಿತು ಆ ದಿನವು

3 comments:

  ಅಂತರ್ವಾಣಿ

May 27, 2008 at 11:20 PM

sudi,

uttamavaada kavana kaNo... :)
nange varNisOke padagaLu sigtha illa

  Sudi

May 28, 2008 at 10:27 PM

danyavadagalu :)

  Anonymous

June 1, 2008 at 12:40 PM

Registration- Seminar on the occasion of kannadasaahithya.com 8th year Celebration

Dear sudheer,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends
-kannadasaahithya.com balaga

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.