ಓ ಗೆಳತಿ

ಏನೋ ಚಿಂತನೆಯ ನಡುವಿನಲಿ ನಿನ್ನಯ ನೆನಪು ಕಾಡಿತು ಮನದಲಿ .. ಅದೇಕೋ ಅರಿಯದು ಕವನವ ಬರೆಯೆಂದಿತು ಮನವು ... ನನ್ನ ಚಿಕ್ಕ ಯತ್ನವು ಈ ರೀತಿಯಲಿ..ಈ ಕವನವು ನಿನಗಾಗಿ ... ಓ ನನ್ನ ಗೆಳತಿ :)

ಮುದ್ದು ಮನದ ಸಿಹಿಮಾತು
ಒಲುಮೆ ತುಂಬಿದ ಮುಗುಳುನಗು
ಮನ ಮುಟ್ಟಿದ ಪ್ರೀತಿಯ ನೋಟ
ಎಲ್ಲಿಂದ ತಂದಿರುವೆ ನೀ ಓ ಗೆಳತಿ

ಕಾದಿಹುದು ನಿನಗಾಗಿ ನನ್ನೀ ಮನ
ನಿನ್ನ ನಗುವು ಕಾಡುತಿಹುದು ಈ ದಿನ
ಏನು ತೋಚದೆ ಹಾದಿಯ ನೋಡುತ
ನಿನ್ನ ಕಾಯುತಿಹೆನು ನಾ ಓ ಗೆಳತಿ

ಮುಗ್ದ ಮನದಿ ತುಂಟತನ ತುಂಬಿ
ದುಃಖ ಮರೆತು ನಗಿಸುವೆ ನೀ
ನಿನ್ನ ಜೊತೆಗಿನ ಪ್ರತಿ ಗಳಿಗೆಯೂ
ಮತ್ತೊಮ್ಮೆ ಬರಲಿ ಓ ಗೆಳತಿ

ನಿನ್ನಯ ಮಾತು ಉಲ್ಲಾಸದ ಸುಧೆಯು
ನೋವನು ಮರೆವ ಮುದ್ದಿನ ನಗುವು
ಕಳೆವ ಸಮಯವ ಹಿಡಿಯುವ ಯತ್ನವು
ನಿನ್ನೀ ಗೆಳೆಯನ ಕಾಯಕ ಓ ಗೆಳತಿ

2 comments:

  ಅಂತರ್ವಾಣಿ

April 5, 2008 at 11:53 AM

ವಾವ್! ಗೆಳತಿಯ ಬಗ್ಗೆ ಆಡಿರುವ ಮಾತುಗಳು... ನಿನ್ನ ಮನಸ್ಸಿನಾಳದ್ದು ಅಂತ ನನಗೆ ಗೊತ್ತು.

ಹೀಗೆ ಬರಿ. ಒಳ್ಳೆ ಕವಿಯಾಗುತ್ತೀಯ...

  Sudi

April 5, 2008 at 12:00 PM

Hmmm...thnxz.. buddy..
ಮನಸಿನ ಆಳ ಎಷ್ಟು ಅಂತ ಅಳೆಯಬೇಕಷ್ಟೇ ಬಿಡು..... ;)

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.