ಮನವು ಕನ್ನಡಿಯು ಮನದ ಮಾತಿದು
ವ್ಯಥೆಯ ಹಿಡಿದ ಪುಟ್ಟನೆ ಗೂಡಿದು
ಸಂತಸದಿ ನಲಿವ ಕೆಲ ಕ್ಷಣ ಮರೆತು
ಕಂಬನಿ ತರುವುದು ನಯನದಿ ಈ ಮನವು
ತೇಲುವುದು ಸವಿ ನೆನಪಿನ ಹೊಳೆಯಲಿ
ನಲಿವುದು ಹರುಷೋಲ್ಲಾಸದ ಕೆಲ ನಿಮಿಷದಲಿ
ಸಂತಸ ಕಳೆವ ಮುನ್ನ ಅಗಲಿಕೆಯ ನೆನೆದು
ಹುಡುಕುತಾ ಕಗ್ಗತ್ತಲಿ ಅಲೆವುದು ಈ ಮನವು
ಕಾಯುವುದು ತನ್ನವರ ಆಗಮನದ ಹಾದಿಯ
ವೇಳೆ ಕಳೆವುದು ಪೋಣಿಸುತ ನಿಮಿಷದ ಹಾರವ
ಅರಿತು ಮುಚ್ಚಿಡಲಾಗದೆ ತನ್ನಯ ಸಂಕಟವ
ಕಣ್ಣಲಿ ತಿಳಿಸುವ ಹಾದಿಯ ಪಡೆದಿಹುದು ಈ ಮನವು
ಈ ಮನವು
Posted by Sudi Thursday, April 24, 2008 at 12:10 AM
Labels: Kannada
Subscribe to:
Post Comments (Atom)
2 comments:
April 24, 2008 at 9:57 PM
ನಿನ್ನ ಮನವು ತುಂಬಾ ಮೃದು
ನಿನ್ನ ಕವನವು ಚೆನ್ನಾಗಿರುವುದು.
Explanation about ನಿನ್ನ ಮನಸ್ಸು is superrO superr..!!!!
May 1, 2008 at 5:37 PM
thnxz machchi...
Post a Comment