ಬರಹ

ಲೇಖನದ ಬಗ್ಗೆ ಯೋಚಿಸುತ್ತ ಬರೆದ ಈ ಕೆಲ ಸಾಲುಗಳು ..

ಒಂಟಿತನದ ಕಾರ್ಮೋಡ ಕಳೆದೆ
ಹಸಿರ ತುಂಬಿದೆ ಮಂಕಾಗಿದ್ದ ಜೀವಕೆ
ಓ ಬರಹ ಕೆಲ ಕ್ಷಣಗಳ ನಿನ್ನ ಆಲಿಂಗನ
ವ್ಯಥೆಯ ಸಮಯವ ಸಂತಸವಾಗಿಸಿದೆ

ಅರಿತಿಹೆನು ಬರಹವ ಕಲೆಯೆಂದು
ಬರಹವೇ ನಿನ್ನ ಒಲುಮೆಯ ತೋಳಲಿ
ಗೊಂದಲವಿಹ ಈ ಮನವ ಅರ್ಪಿಸಿ
ತುಂಟ ಆತ್ಮದಿ ನಿನ್ನಯ ವ್ಯಾಪಿಸು

ಒಂಟಿತನದಿ ಕಾಲಯಾಪಿಸುವ ಮನವ
ನಿನ್ನ ಎದೆಗವಚಿ ಮರೆಸು ನೀ ಏಕಾಂತವ
ನನ್ನ ಅಂತರಾತ್ಮವ ಕೆಲ ನಿಮಿಷಗಳು
ಮರೆಮಾಚಿ ಮರೆಸು ಮನದ ದುಃಖವ

5 comments:

  ತೇಜಸ್ವಿನಿ ಹೆಗಡೆ

June 3, 2008 at 10:01 AM

ತುಂಬಾ ಸುಂದರ ಕವನ.

"ಒಂಟಿತನದಿ ಕಾಲಯಾಪಿಸುವ ಮನವ
ನಿನ್ನ ಎದೆಗವಚಿ ಮರೆಸು ನೀ ಏಕಾಂತವ"

ನೆನಪಿಡುವಂತಹ ಸಾಲುಗಳು! ಬರುತ್ತಿರುವೆ.

  ಅಂತರ್ವಾಣಿ

June 3, 2008 at 10:48 PM

ನೀನು ಬರಹವನ್ನು ಆಲಂಗಿಸಿದ ಕ್ಷಣ ಹಾಗು ಅದರ ಒಲುಮೆ ತೋಳಿನಲ್ಲಿ ಬಂಧಿಯಾದ ಕ್ಷಣ... ಅದ್ಭುತ..

ಇದರೊಂದಿಗೆ ಕೊನೆ ಚರಣ....

  Sudi

June 3, 2008 at 10:53 PM

thank you :) Tejaswini

  Sudi

June 3, 2008 at 10:55 PM

hmmm yeah thats right jay.. its kind of different exp i had with bloggin..

thnxz man... ella nimmatavara wishes alpa swalpa bariyodna kalthiddini :)

  ಸುಧೇಶ್ ಶೆಟ್ಟಿ

June 18, 2008 at 12:48 AM

ಬರಹದ ಮೇಲಿನ ತಮ್ಮ ಕವನ ತು೦ಬಾ ಸು೦ದರವಾಗಿತ್ತು.
ಹೀಗೆ ಕವನಗಳನ್ನು ಬರೆಯುತ್ತಿರಿ.
ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಬ್ಲಾಗಿಗೆ ಬ೦ದು ಕವನಗಳನ್ನು ಅಸ್ವಾದಿಸುತ್ತೇನೆ.

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.