ಕಲ್ಪನೆ

ಕವನವ ಬರೆಯುವ ಕವಿಯಲ್ಲ ನಾನು ಆದರೆ ಕವನದ ಪದಗಳೇ ನಾನಾಗಿರುವೆ..... ಎನ್ನುತಾ ತನ್ನ ಕಲ್ಪನೆಯ ಹುಡುಗಿಯ ಬಗ್ಗೆ ಹೇಳಲು ಮುಂದಾಗಿದ್ದ ನನ್ನ ಗೆಳೆಯನೊಬ್ಬ...ಅವನ ಕವಿತೆಯ ವಾಚನ ರೀತಿಯನು ಹೀಗೆ ಬಣ್ಣಿಸಿಹೆನು

ಕಲ್ಪನಾ ಕಾವ್ಯವ ನುಡಿಯಲು ಗೆಳೆಯನು
ಆಲಿಸಿ ಸವಿಯಲು ಗುಂಪೊಂದು ಕೂಡಿ
ಆವರಿಸಿದ ಮೌನವನು ಮಾಯವಾಗಿಸಿ
ಸಂತಸದ ಓಕುಳಿಯ ಹರಿಸಿ ಕುಣಿದಾಡಿಸಿತು

ಗೆಳೆಯನ ಪ್ರಯಾಸ ಕವನವ ಹೇಳಲು
ನೋಡಲಾಗದ ಅವನ ವಿಪರ್ಯಾಸವು
ಪದಗಳನು ಆರಿಸಿ ತಿಳಿಸಿದ ಹಾದಿಯು
ಹರುಷೋಲ್ಲಾಸದಲಿ ತೇಲಿಸಿತು ಮನಸನು

ಕವನದ ಕಲ್ಪನಾರ್ಥವ ಮನದಲ್ಲಿ ಕಲ್ಪಿಸಿ
ಕೇಳುಗರ ಮನದಾಳದಿ ಭಾವನೆಯ ಇಳಿಸಿ
ತಿಳಿಸುತ ಕಾವ್ಯದ ಸಾರವನು ಪಡೆದನು
ಗುಣಗಾನದ ಸುರಿಮಳೆಯ ಬಹುಮಾನವನು

1 comments:

  ಅಂತರ್ವಾಣಿ

July 3, 2008 at 10:16 PM

ನಿನ್ನ ೨೫ನೇ ಪೋಸ್ಟಿಗೆ ಅಭಿನಂದನೆಗಳು....

ನಿನ್ನ ಗೆಳೆಯನ ಬಗ್ಗೆಗಿನ ಕವನ..ಅದ್ಭುತ ಕಣೋ...ಹೀಗೇ ಬರೆಯುತ್ತಿರು...

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.