ಚುಮು ಚುಮು ಈ ಚಳಿಯಲಿ
ನನ್ನ ಬಳಿ ನೀ ಇರದಿರಲು
ಸವಿ ಚಣಗಳ ಆ ಸನಿಹವ
ಮನದಿ ಇರಿಸಿಹೆನು ಒಲವೆ
ನಿನ್ನಯ ಸವಿ ನೆನಪಿನಲಿ
ಮನದ ಏಕಾಗ್ರತೆಯ ಮೀರಿ
ಚಳಿಯ ಮರೆತ ಆಭಾಸವು
ಕಣ್ಮುಂದೆ ನೀ ಬರಲು ಒಲವೆ
ನಿನ್ನ ಕಂಡ ಆ ಸಮಯದಿ
ಹರುಷದ ಸುಧೆಯು ಹರಿಸಿ
ಚಣದಿ ಮನವ ತಲ್ಲಣಿಸಿತು
ನಿನ್ನಯ ಆ ನಗು ನನ್ನ ಒಲವೆ
ಅಚ್ಚರಿಯಲಿ ಎಚ್ಚೆತ್ತ ನೇತ್ರವು
ನಿನ್ನ ಇರುವಿಕೆಯ ಶೋಧಿಸಲು
ಸ್ವಪ್ನ ಲೋಕದಿಂದ ಇಳಿದ ಚಣವು
ಚಳಿಯು ಆಲಿಂಗಿಸಿತು ನನ್ನ ಒಲವೆ
ಚುಮು ಚುಮು ಚಳಿ
Posted by Sudi Friday, July 11, 2008 at 12:04 AM
Labels: Kannada
Subscribe to:
Post Comments (Atom)
6 comments:
July 12, 2008 at 10:53 PM
ಸಕ್ಕತ್ತಾಗಿದೆ ಕಣೋ...
ಚಳಿ ಮಾಯವಾಯ್ತಾ?
July 12, 2008 at 11:58 PM
maaya aaginu aagilla :D
July 13, 2008 at 3:12 PM
ಸರಳ ಸುಂದರ ಕವನ.. ಮತ್ತಷ್ಟು ಬರಲಿ.
July 13, 2008 at 4:06 PM
thnxz Tejaswini :) hope i can keep writing :)
July 14, 2008 at 11:07 AM
ಮನುಷ್ಯನ ಕಲ್ಪನಾ ಶಕ್ತಿಗೆ ಮಿತಿಯೇ ಇಲ್ಲ ಅಲ್ವಾ?......
ಕೊನೆಯ ನಾಲ್ಕು ಸಾಲುಗಳು ತುಂಬಾನೇ ಚೆನ್ನಾಗಿದೆ..
July 14, 2008 at 11:20 AM
ಧನ್ಯವಾದಗಳು .....
ಹೌದು no limits ಕಲ್ಪನೆಗೆ....
Post a Comment