ಈ ಕವನವು ಯಾರಿಗಾಗಿ ಮೀಸಲು ಅವಳಿಗೋ ಇಲ್ಲ ಅವಳ ಮುದ್ದಾದ ನೋಟಕೋ...ನೀವೇ ಹೇಳಿ .. ನನ್ನ ಮನದ ಈ ತಳಮಳಕೆ ಒಂದು ಹಾದಿ
ದಿಗಂತದಿ ಸಂಧ್ಯಾವರ್ಣವನು ಕಾಯುತ
ಅವಳ ಬರುವಿಕೆಯ ಹಾದಿಯನು ನೋಡುತ
ಮನದಾಳದಿ ನೂರು ಆಸೆಯನು ತುಂಬಿರುವೆ
ಮುದ್ದಾದ ಮೊಗದ ಚಿತ್ರವ ಮನದಲಿರಿಸಿ
ಕಣ್ಣಂಚಿನಲಿ ಬಚ್ಚಿಟ್ಟ ತಂಪಾದ ಆ ಕ್ಷಣವ
ನೆನೆದು ನೂರು ಆಸೆಯನು ಹೊಂದಿರುವೆ
ನನ್ನ ಈ ಎರಡು ನಯನಗಳು ಸಾಲದೇ
ಅವಳ ಆ ನೋಟವ ಅನುಭವಿಸಲಾಗದೇ
ಮನದಲಿ ನೂರು ಆಸೆಯನು ಚಿಗುರಿಸಿರುವೆ
ಮತ್ತೆ ಮತ್ತೆ ಕಾಡುವಂತ ಆ ದೃಶ್ಯವನು
ಪ್ರತಿ ನಿತ್ಯ ನೋಡಲೆಂತು ಈ ಮನವು
ಕಾಯುತ ನೂರು ಆಸೆಯ ಕನಸನು
3 comments:
July 1, 2008 at 10:52 PM
ಪ್ರಕೃತಿ ಮಾತೆಗೆ ಜೈ!!!!
ನಿನ್ನ ಹುಡುಗಿಗೆ ಕೊಡಬೇಡ ಕೈ :)
ಬೊಂಬಾಟ್ ಕವನ...!!!!
July 2, 2008 at 7:10 PM
ಇದು ಅವಳಿಗೂ ಅಲ್ಲ ಅವಳ ಮುದ್ದಾದ ನೋಟಕ್ಕೂ ಅಲ್ಲ.
ನಿಮ್ಮ ಕಣ್ಣುಗಳಿಗೇ ಮೀಸಲು ಅಂದರೆ ಸೂಕ್ತ. ಹೆಹೆ ಇದು ನನ್ನ ಅನಿಸಿಕೆ ಅಷ್ಟೆ...
ಹೌದು ಎಷ್ಟೋ ಸಲಿ ಕೆಲವೊಂದು ನಮಗೆ ಎರಡು ನಯನಗಳು ಸಾಲೋದೆ ಇಲ್ಲ ನೋಡೋಕೆ..
July 2, 2008 at 7:18 PM
ಸಕತ್ತು ಕಮೆಂಟ್ ಕಣ್ರೀ ... ನೂರಕ್ಕೆ ನೂರರಷ್ಟು ನಿಜಾ .. :)
Post a Comment