ಮುಂಜಾನೆಯ ವಿದ್ಯಾಲಯದ ಭೇಟಿ ...

ಭಾಗ ೨ - ನಡಿರೋ ಕಸ ಗುಡ್ಸೋರು ಬರ್ತಾರೆ !!!

ಅದೊಂದು ದಿನ ಮುಂಜಾನೆ ಎದ್ದು ನಾನು ಹೊರಟಿದ್ದೆ ವಿದ್ಯಾಲಯದ ಕಡೆಗೆ, "ನಿಜ ಹೇಳಬೇಕಂದ್ರೆ ಇದೆ ಪ್ರತಿ ದಿನದ ಮುಂಜಾನೆ ಆಗಿತ್ತು", ಆ ದಿನಗಳು ತುಂಬ ಕ್ಲಿಷ್ಟಕರ ಯಾಕಂದರೆ ಮುಂಜಾನೆ ಎದ್ದು ಜೋಗಿಂಗ್ ಅಂತ ಬೆನ್ನಮೇಲೆ ಪುಸ್ತಕ ತುಂಬಿದ ಚೀಲವನ್ನು ಹೊತ್ತು ವಿದ್ಯಾಲಯದ ಕಡೆ ನಡೆಯುವುದೇ ಆಗಿತ್ತು ನನ್ನ ದಿನಚರಿ.."ಹೇಗೆ ಜೋಗಿಂಗು ಮತ್ತು ಕಾಲೇಜ್ ಕಡೆ ವಾಲ್ಕಿಂಗು, ಟು ಇನ್ ಒನ್ "

ನಾನಿದ್ದಿದ್ದು ಬಾಡಿಗೆಯ ಒಂದು ಸಣ್ಣ ಕೋಣೆಯೊಂದರಲ್ಲಿ, ಮುಂಜಾನೆಯ ತಿಂಡಿ ಕೆಲವೊಮ್ಮೆ ಯಾವುದಾದರೂ ಹೋಟೆಲೊಂದರಲ್ಲಿ ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಇದ್ದೆ ಇರ್ತಿತ್ತು ನಮ್ಮ ವಿದ್ಯಾಲಯದ ಪಾಕಶಾಲೆಯ ಇಡ್ಲಿ ವಡೆ.

ಅದೇನೋ ಗೊತ್ತಿಲ್ಲ ಗೆಳೆಯರೆಲ್ಲರೂ ರೇಗಿಸುತ್ತಿದ್ದರು ನನ್ನನ್ನು ಬಿಟ್ಟರೆ ನಾನು ಕ್ಯಾಂಟೀನ್ ಅಲ್ಲೇ ದಿನವೆಲ್ಲ ಕಳೆಯುತಿದ್ದೆ ಅಂತ.... ಅದು ನಿಜಾನೇ ಅನ್ನಿ ನಾನು ಪ್ರತಿ ಬಿಡುವಿನ ವೇಳೆಯು ಬರುವುದೇ ತಡ "ನಡೀರಿ ಕ್ಯಾಂಟೀನ್ ಗೆ ಹೋಗೋಣ, ಕಾಫಿ ಕುಡಿಬೇಕು !!!!" ಅನ್ನೋದೇ ನನ್ನ ರಾಗವಾಗಿರ್ತಿತ್ತು ಅಲ್ಲ್ವೆನ್ರೋ ನಗ್ತಾ ಇದ್ದಿರ ಅನ್ಸುತ್ತೆ ಇದ್ನ ಓದಿ.

ಕ್ಯಾಂಟೀನ್ ಹೋಗಿ ಕೂತ್ಕೊಂಡು ಹರಟೆ ಹೊಡೆಯುತ್ತ ಆ ಒನ್ ಬೈ ಟು ಕಾಫಿ ಸವಿಯುತ, ಒಬ್ಬರನ್ನೊಬ್ಬರು ರೇಗಿಸುತ್ತಾ ಕಳೆಯುತ್ತಿದ ಆ ಸಮಯ ನೆನೆಸಿಕೊಂಡರೆನೇ ಮನವೆಲ್ಲ ಖುಷಿ, ಆದರು ಒಂಚೂರು ಬೇಸರವೂ ಆಗುತ್ತೆ ಎಲ್ಲೋದವು ಆ ದಿನಗಳು ಅಂತ ಯೋಚನೆ ಬರುತ್ತೆ .. ಕಾಫಿ ಯಾ ಸವಿದು ಹೊರಟೆವು ನಾವು ಎಲ್ಲಿ ಹೇಳಿ ನೋಡೋಣ...ಹೌದು ನಿಮ್ಮ ಯೋಚನೆ ಸರಿಯಾಗೆ ಇದೆ ಸ್ನೇಹಿತರೇ "ಕ್ಯಾಂಟೀನ್ ಕಾಫಿ ಮುಗ್ಸಿ ಪಾರ್ಕಿಂಗ್ ಸ್ಥಳದ ಕಡೆ ನಮ್ಮ ಪಯಣ"

ದ್ವಿಚಕ್ರ ವಾಹನಗಳ ಮೇಲೆ ಕುಳಿತು ಮತ್ತೊಮ್ಮೆ ಶುರುವಾಯಿತು ನಮ್ಮ ಹರಟೆ..ನಡೆಯುತ್ತಿದ್ದ ಹರಟೆಯ ನಡುವಿನಲಿ ಕೇಳಿತೊಂದು ದನಿ, "ಸರಿ!!! ನಾನಿನ್ನೂ ಹೊರಟೆ ಮನೆಯ ಕಡೆ".

ಅಮೇಲೆ .. ಏನು ನನ್ನ ಗೆಳೆಯ ಹೊರಟ್ನ ಮನೆಗೆ ಇಲ್ಲ ಏನು ಅಯಿತು ಅಂತ ಮುಂದೆ ನೋಡೋಣ ಮುಂದಿನ ಭಾಗದಲ್ಲಿ .....

1 comments:

  ಅಂತರ್ವಾಣಿ

April 6, 2008 at 5:15 PM

ನಮ್ಮ ಕಾಲೇಜು ಜೀವನ ಮತ್ತೆ ಜ್ಞಾಪಿಸಿದ್ದೀಯ...
ನಾನು ಎಷ್ಟೋ ಬಾರಿ, ನಿನ್ನ ಇಡ್ಲಿ, ವಡೆ, ಹಾಗು ಕಾಫಿ ಸವೆದ ನೆನಪು ಮರೆತಿಲ್ಲ...

ಮನೆಗೆ ಹೋಗೋ ಗೆಳೆಯ ಯಾರೊ?
ಮುಂದಿನ ಭಾಗದಲ್ಲಿ ನೋಡ್ತೀನಿ ಬಿಡು.

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.