ಭಾಗ ೧ - ಮುಂಜಾನೆಯ ವಿದ್ಯಾಲಯದ ಭೇಟಿ
"ಮಕ್ಳ ಕಸ ಗುಡ್ಸೋರು ಬರ್ತಾರೆ !!! ಕಸದ ಜೊತೆ ನಮ್ಮನ್ನು ಗುಡ್ಸಿ ಕಸದ ಬುಟ್ಟಿಗೆ ಹಾಕ್ತಾರೆ" ಇದೆ ನಮ್ಮ ಗೆಳೆಯನ ವಾಘ್ದಾನ ಆಗಿತ್ತು. ನಾ ಮನೆಗೆ ಹೋಗ್ಬೇಕು..ಮನೇಲಿ ಯಾರಿಲ್ಲ ಕಣ್ರೋ ಬೇಗ ಹೋಗ್ಬೇಕು... ಏನ್ ಮಾಡ್ತೀರ ಇಲ್ಲಿ ಕೂತ್ಕೊಂಡು ಮನೆಗೆ ಹೋಗಿ ಮಲ್ಕೊತೀನಿ ಫುಲ್ ಸುಸ್ತು ಕಣ್ರೋ "ooooffff!!! ಸಾಕಾಯಿತು ಕ್ಲಾಸ್ ಅಟೆಂಡ್ ಮಾಡಿ "...ಇನ್ನು ಏನೇನೋ ಕಾರಣ ಹೇಳ್ತಿದ್ದ ನಮ್ಮ ಗೆಳೆಯ ಕರಿತಿದ್ವಿ ಅವ್ನ ನಾವು "ರೋಲ್ಸ್ ರೋಯ್ಸ್"..
"ಕ್ಲಾಸ್ ಅಲ್ಲಿ ಸಿಟ್ಟಿಂಗು ಮತ್ತು ಪಾಸ್ ಮಾಡಿಂಗು ಕಮೆಂಟು" ಏನನ್ಕೊಂಡ್ರಿ ನೀವೆಲ್ಲ ನಮ್ಮ ರೋಲ್ಸ್ ಬಗ್ಗೆ ಕಮೆಂಟ್ ಅನ್ಕೊಂಡ್ರ..... ನಿಜ ಹೇಳಬೇಕಂದ್ರೆ ನಮ್ಮೆಲ್ಲಾರ್ಗು ಅನ್ವಯಿಸುತ್ತೆ ಈ ಕಮೆಂಟ್ ಹ ಹ ಹ ಹ ಹ :)... ಆ ದಿನಗಳ ಮಜಾನೇ ಬೇರೆ ಅದ್ನ ಇಲ್ಲಿ ಕೆಲವು ಶಭ್ದಗಳಲ್ಲಿ ಬರೆಯೋದು ಅಸಾಧ್ಯ.
ಸರಿ ಪುನಃ ಬರೋಣ ನಮ್ಮ ಗೆಳೆಯನ ಮನೆಯ ಪಯಣದ ಕಡೆ.. ಎಲ್ಲಿದ್ವಿ ಹಾಃ " ಸುಸ್ತಾಯಿತು ಮನೆಗೆ ಹೋಗಿ ಆರಾಮ ಮಾಡಬೇಕು" ಅಂತ ಹೇಳ್ತಿದ್ದ ನಮ್ ಗೆಳೆಯ. ಹಾಗೋ ಹೀಗೋ ಮಾಡಿ ಅವ್ನ ಚುಢಾಯಿಸಿ ಕಾಲು ಎಲ್ಡು ಕಷ್ಟ ಪಟ್ಟು ನಾವು ಅಬ್ಬಬ್ಬ ಅನ್ನೋ ಅಷ್ಟು ಹೊತ್ತಿಗೆ ಹೇಗಾದರು ಅವನ ಮನಸ್ಸು ಬದಲಾವಣೆ ಆಗುತ್ತೆ " ಸರಿ ಕಣ್ರೋ, ಇರಬೇಕಲ್ಲ ಇರ್ತೀನಿ ಕಣ್ರೋ ಎಸ್ಟು ಹೊತ್ತು ಬೇಕಾದ್ರೂ ಇರ್ತಿನೋ " ಅಂತ ಹೇಳೇ ಬಿಡೋದ ನಮ್ ರೋಲ್ಸ್ ಅಷ್ಟೆ ಹೇಳಿದ್ನ ಅದ್ರ ಜೊತೆ ಇನ್ನೊಂದು ವಾಕ್ಯ " ಲೋ ಇರ್ತಿನ್ರೋ ಬಟ್ ಇವತ್ತು ಸ್ವಲ್ಪ ಅರ್ಜೆಂಟು ಕೆಲ್ಸ ಇದೆ ಕಣ್ರೋ ಡ್ರಾಪ್ ಮಾಡಕ್ ಹೋಗಬೇಕೋ ಮನೆಗೆ ಹೋಗಿ ಅಮೇಲೆ ಮಜೆಸ್ತಿಕ್ ಹೋಗ್ಬೇಕು !!!" ಅನ್ ಬಿಡೋದ .. ಅಂತು ಇಂತೂ ನಾವೆಲ್ಲ ಪಟ್ಟ ಹರ ಸಾಹಸ ಒಂದೇ ನಿಮಿಷಕ್ಕೆ ಗಾಳಿಲಿ ಧೂಳಿನ ಕಣ ಹರಡೋ ಹಾಗೆ ಮಂಗ ಮಾಯ ಆಗಿತ್ತು.
ಕೊನೆಗೂ ನಮ್ಮ ಗೆಳೆಯನೆ ಗೆದ್ದ ನಾವು ನಮ್ಮೆಲ್ಲ ಪ್ರಯತ್ನ ಮಾಡಿನೂ ಅವ್ನ ಎದುರು ವಿಫಲರಾದೆವು, ಹೀಗೆ ನೋಡಿ ನಮ್ಮ ಮುಂಜಾನೆಯ ವಿದ್ಯಾಲಯದ ಭೇಟಿ ಅಂತ್ಯ ಆಗ್ತಿದ್ದಿದ್ದು " ನಡಿರೋ ಕಸ ಗುಡ್ಸೋರು ಬರ್ತಾರೆ !!!!" ಅಂತ ಹೇಳ್ತಾ.
ಲೋ ರೋಲ್ಸ್ ಇದ್ನ ಓದಿ ದಯವಿಟ್ಟು ನನ್ ಬೈಕೊಬೇಡ್ವೊ... :) :)
ನಡಿರೋ ಕಸ ಗುಡ್ಸೋರು ಬರ್ತಾರೆ !!!!
Posted by Sudi Tuesday, April 8, 2008 at 7:43 PM
Labels: Kannada
Subscribe to:
Post Comments (Atom)
1 comments:
April 8, 2008 at 10:54 PM
ಸುಧಿ,
ಈ ಸನ್ನಿವೇಶ ನಡೆಯೋವಾಗ ನಾನು ನಿಮ್ಮ ಗುಂಪಲ್ಲಿ ಇರಲಿಲ್ಲ ಕಣೊ.. ಆದ್ರು.. ನಮ್ಮ ವತ್ಸನ ಡೈಲಾಗು ಸೂಪರ್...
Post a Comment