ಜೊತೆಯಲ್ಲಿ ಆಡಿ ಕುಣಿದಾಡಿದ ದಿನಗಳ ಮರೆಯುತ್ತಾರಲ್ಲ . . . ಸಂತಸದ ಕೆಲ ಕ್ಷಣಗಳನ್ನು ನೆನಪಾಗಿಸುತ್ತಾರಲ್ಲ . . .ಇದೇಕೋ ಹೀಗೆ ಅನ್ನೋ ಯೋಚನೆಯಲಿ ಈ ಕವನ ಬರೆಯುವ ಯತ್ನ . . .
ಹರುಷದ ಆ ಸಮಯವೂ
ಕಳೆದ ಕೆಲ ನಿಮಿಷವೂ
ಜೊತೆಗೆ ನಲಿದ ಆ ದಿನವೂ
ನೆನೆಯದೆ ಮರೆತೆಯೇಕೆ ನೀ . . .
ಮರೆತರೂ ನೀ ಹೇಳುತಿದ್ದ
ಅರಿತರೂ ನೀ ನುಡಿಯುತಿದ್ದ
ಮನ ನೊಂದರೂ ನಗುತಿದ್ದ
ದಿನಗಳ ಮರೆತೆಯೇಕೆ ನೀ . . .
ನೀ ಹೇಳದ ವಿಷಯವಿಲ್ಲ
ನಾ ಕೇಳದ ಮಾತುಗಳಿಲ್ಲ
ದುಃಖವ ಮರೆವ ಸಂತಸವ
ಹೇಳಲು ಮರೆತೆಯೇಕೆ ನೀ . . .
ಜೊತೆಗೂಡಿ ನಲಿದಾಡುವ
ಜೊತೆಗೂಡಿ ಹಾರೈಸಿದ
ಗೆಳೆಯ ಗೆಳತಿಯರ ನಗು
ಮೊಗವ ಮರೆತೆಯೇಕೆ ನೀ . . .
1 comments:
April 17, 2008 at 11:25 PM
yaaru baalyavannu mareyOke aagalla!
ninna baalya jeevana hEge kaLede antha chennagi bardideeya..
Post a Comment