ಅವಳು ಯಾರು ಅಂತ ಕೇಳಬೇಡಿ ನನ್ನ ಬಳಿ ಬಂದು .. :)
ಅಂದು ನಾ ತಲುಪಿದ ಆ ಗಳಿಗೆಯಲಿ
ನಡೆಯುತಿದ್ದೆ ನಾ ಯೋಚನೆಯಲಿ
ಕಾಡುತಿತ್ತು ಮನವ ಏನೋ ಆ ದಿನ
ನನ್ನದೇ ಲೋಕದಲ್ಲಿದ್ದೆ ಆ ಗಳಿಗೆಯಲಿಯೋಚನೆಯಲಿ ಮುಳುಗಿದ ಆ ಸಮಯದಲಿ
ಸಹೋದ್ಯೋಗಿಯರ ಕಂಡೆ ನಾ ಲಿಫ್ಟಲಿ
ಅವರಲೊಂದು ಮುದ್ದು ಮೊಗವ ಕಂಡೆ ನಾ
ಯೋಚನೆಯೇ ಮರೆತು ಮೈ ಮರೆತೆ ನಾಕೆಲ ಕ್ಷಣಗಳೇ ಕಳೆದೆನು ಆ ಸ್ಥಳದಲಿ
ಕಂಡು ಅವಳ ಮುದ್ದಾದ ನಗುವ
ಏನು ಅರಿಯದಾದ ನನ್ನ ಮನವ
ತಟ್ಟಿ ಎಬ್ಬಿಸಲು ಗೆಳೆಯನೊಬ್ಬ ಬರಲುಶುಭೋದಯ ಹೇಳಲು ಇಲ್ಲವಾದ ಮಾತುಗಳು
ಎಡೆಬಿಡದೆ ಗೆಳೆಯನ ಶುಭದಿನವ ಹಾರೈಕೆಯಲಿ
ಕಾಡುತ್ತಿದ್ದ ಯೋಚನೆಯ ಮರೆತಿದ್ದೆ ಅವಳ ನಗುವಿನಲಿ
ಮನಸೇ ನನ್ನ ಬಳಿ ಇಲ್ಲವಾಗಿತ್ತು ಆ ಗಳಿಗೆಯಲಿ
2 comments:
April 14, 2008 at 9:55 PM
sudi,
very nice one!!!!
Lift puraaNa...
April 14, 2008 at 10:26 PM
ha ha ha :)
Post a Comment